ಈ ಹೊತ್ತಿಗೆ E Hottige

ನಮ್ಮ ಓದು , ನಮ್ಮ ಅಭಿಪ್ರಾಯ

About Us

ದಿನಾಂಕ ೧೦ ಫೆಬ್ರುವರಿ ೨೦೧೩ರಂದು ರಂಗಭೂಮಿ ಮತ್ತು ಕಿರುತೆರೆ ಅಭಿನೇತ್ರಿ ಜಯಲಕ್ಷ್ಮೀ ಪಾಟೀಲ್ ಅವರು ‘ಈ ಹೊತ್ತಿಗೆ’ ಬಳಗವನ್ನು ಪ್ರಾರಂಭಿಸಿದರು. ೨೦೧೬ರಲ್ಲಿ ಇದು ಟ್ರಸ್ಟ್ ಆಗಿ ನೊಂದಣಿಯಾಯಿತು.

ಈ ಹೊತ್ತಿಗೆ – ಇದು ಓದುಗರ ವೇದಿಕೆ. ಇಲ್ಲಿ ಭಾಗವಹಿಸುವ ಪ್ರತಿಯೊಬ್ಬ ಓದುಗರೂ ಅಂದಿನ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳು. ‘ಈ ಹೊತ್ತಿಗೆ’ಯಲ್ಲಿ ಹಿರಿಯ-ಕಿರಿಯ ಲೇಖಕರು ಎನ್ನುವ ಭೇದವಿಲ್ಲದೆಯೇ ಕನ್ನಡದ ಪುಸ್ತಕವೊಂದನ್ನು ಆಯ್ದು, ಆ ಪುಸ್ತಕವನ್ನು ಓದಿದವರೆಲ್ಲರೂ ಒಟ್ಟು ಸೇರಿ ಚರ್ಚಿಸುವುದರಿಂದ, ಉಳಿದ ಸಾಹಿತ್ಯಿಕ ಕಾರ್ಯಕ್ರಮಗಳಿಂದ ‘ಈ ಹೊತ್ತಿಗೆ’ಯು ಭಿನ್ನವಾಗಿ ನಿಲ್ಲುತ್ತದೆ. ಒಂದು ಪುಸ್ತಕದ ಓದು, ಓದುಗರಲ್ಲಿ ಬೇರೆ ಬೇರೆ ಅಭಿಪ್ರಾಯವನ್ನು ಮೂಡಿಸಬಲ್ಲದು. ಎಲ್ಲರ ಗ್ರಹಿಕೆಯ ಅರಿವಿನಿಂದ ಪುಸ್ತಕದ ಕುರಿತ ನಮ್ಮ ಗ್ರಹಿಕೆಯೂ ವಿಸ್ತಾರಗೊಂಡು, ಒಂದು ಕೃತಿಯ ಉಳಿದ ಮಗ್ಗುಲುಗಳನ್ನು ಅರಿತುಕೊಳ್ಳುವುದು, ಓದನ್ನು ಸಾರ್ಥಕಗೊಳಿಸಿಕೊಳ್ಳುವುದು ‘ಈ ಹೊತ್ತಿಗೆ’ಯ ಉದ್ದೇಶವಾಗಿದೆ. ಅನೇಕ ಸಾಹಿತ್ಯಾಸಕ್ತ ಸ್ನೇಹಿತರ ಸಾಹಿತ್ಯದೊಲುಮೆಯಿಂದಾಗಿ, ಸಹಕಾರದಿಂದಾಗಿ ಇಲ್ಲಿಯವರೆಗೆ ಕನ್ನಡದ 74ಕ್ಕೂ ಮೇಲ್ಪಟ್ಟು ಸಾಹಿತ್ಯ ಕೃತಿಗಳನ್ನು ಇಲ್ಲಿ ಚರ್ಚಿಸಲಾಗಿದೆ. ಚರ್ಚಿಸಲ್ಪಡುವ ಕೃತಿಗಳ ಲೇಖಕರಲ್ಲಿ ಅನೇಕರು ನಮ್ಮ ಕರೆಗೆ ಓಗೊಟ್ಟು, ತಮ್ಮ ಕೃತಿಯ ಚರ್ಚೆಯ ದಿನದಂದ ಆಗಮಿಸಿ, ಓದುಗರ ಗೊಂದಲಗಳಿಗೆ ಉತ್ತರಿಸುತ್ತಾ ತಮ್ಮ ಸಾಹಿತ್ಯ ಪಯಣದ ಕುರಿತು ಮಾತನಾಡುವುದರ ಮೂಲಕ ಲೇಖಕ-ಓದುಗರ ನಡುವೆ ಒಂದು ಭಾವ ಸೇತುವೆಯನ್ನು ಹುಟ್ಟುಹಾಕಿದ ಸಂತಸ ಈ ಹೊತ್ತಿಗೆಯದು.

ಕೇವಲ ಪುಸ್ತಕಗಳ ಮೇಲಿನ ಚರ್ಚೆಗಷ್ಟೇ ಈ ಹೊತ್ತಿಗೆ ಸೀಮಿತವಾಗಿರದೇ ಹಲವು ವಿಶಿಷ್ಟ, ಕ್ರಿಯಾತ್ಮಕ ಪ್ರಯೋಗಗಳನ್ನೂ ಕೈಗೊಂಡು ಯಶಸ್ವಿಯಾಗಿದೆ. ವಾರ್ಷಿಕೋತ್ಸವದ ಅಂಗವಾಗಿ ಪ್ರತೀ ವರ್ಷ ಹಮ್ಮಿಕೊಳ್ಳಲಾಗುವ ಕಾರ್ಯಕ್ರಮ ‘ಹೊನಲು’, ಎರಡು ದಿನಗಳ ರಾಜ್ಯಮಟ್ಟದ ಸಾಹಿತ್ಯ ಕಮ್ಮಟಗಳು, ನಗೆ ಹೊತ್ತಿಗೆ, ಕಾವ್ಯ ಹೊತ್ತಿಗೆ, ನಾಟಕ ವಾಚನ, ಪುಸ್ತಕ ಬಿಡುಗಡೆಗಳು – ಇವೆಲ್ಲಾ ಈ ಹೊತ್ತಿಗೆಗೆ ಮತ್ತಷ್ಟು ಬಣ್ಣಗಳನ್ನು ತುಂಬಿದಂಥ ಕಾರ್ಯಕ್ರಮಗಳು. ೨೦೧೫ರ ನವಂಬರ್ ತಿಂಗಳಲ್ಲಿ ನಡೆದ ರಾಜ್ಯ ಮಟ್ಟದ ವಿಮರ್ಶಾ ಕಮ್ಮಟವು, ರಾಜ್ಯದಲ್ಲೇ ಪ್ರಥಮ ರಾಜ್ಯ ಮಟ್ಟದ ವಿಮರ್ಶಾ ಕಮ್ಮಟ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಈ ಹೊತ್ತಿಗೆಯು ತನ್ನ ಐದನೇ ವಾರ್ಷಿಕೋತ್ಸವದ ಅಂಗವಾಗಿ ೨೦೧೭ರಲ್ಲಿ ೧) ಕಾಲೇಜು ವಿದ್ಯಾರ್ಥಿಗಳಿಗಾಗಿ ಮತ್ತು ೨) ಸಮಸ್ತ ಕನ್ನಡಿಗರಿಗಾಗಿ ಕಥಾ ಸ್ಪರ್ಧೆಗಳನ್ನು ಆರಂಭಿಸಿತು. ಕನ್ನಡ ಮಾಧ್ಯಮದಲ್ಲಿ ಓದುವ ಕನ್ನಡಿಗರ ಸಂಖ್ಯೆಯು ಕಡಿಮೆಯಾಗುತ್ತಿರುವ ಆತಂಕದ ಹಿನ್ನೆಲೆಯಲ್ಲಿ, ಕನ್ನಡ ಸಾಹಿತ್ಯಾಸಕ್ತಿಯನ್ನು ಉಳಿಸಿ ಬೆಳೆಸುವ ಪ್ರಯತ್ನವಾಗಿ ವಿದ್ಯಾರ್ಥಿಗಳಿಗಾಗಿ ಹಮ್ಮೊಕೊಂಡ ಈ ಕಥಾ ಸ್ಪರ್ಧೆಯು ಮುಂದೆ ೨೦೧೯ರಲ್ಲಿ, ಕಾಲೇಜು ವಿದ್ಯಾರ್ಥಿಗಳನ್ನೊಳಗೊಂಡು ೨೬ರ ವಯಸ್ಸಿನವರೆಗಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಬದಲಾಯಿಸಲಾಯಿತು.
೨೦೧೮ರಿಂದ ಪ್ರತೀ ವರ್ಷ
ಆಯ್ಕೆಯಾದ ಅಪ್ರಕಟಿತ ಕಥಾ ಸಂಕಲನಕ್ಕೆ `ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಕೊಡಲಾಗುತ್ತಿದೆ. ಈ ಪ್ರಶಸ್ತಿಯು ೧೦,೦೦೦ ರೂಪಾಯಿಗಳ ನಗದು ಬಹುಮಾನವನ್ನು ಹೊಂದಿದೆ.

ಭಾರತದಲ್ಲಿ ಮಾರ್ಚ್ ತಿಂಗಳಿನಿಂದ ಹೊರಗೆ ಕಾಲಿಡದಂತೆ ಕಾಡುತ್ತಿರುವ ಕೋಡಿಡ್ – ೧೯ ನ ಕಾರಣದಿಂದಾಗಿ ಭಾರತ ಸರಕಾರ ಲಾಕ್ ಡೌನ್ ವಿಧಿಸಿದ ಕಾರಣವಾಗಿ ಈ ಹೊತ್ತಿಗೆಯು ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲು ಅಸಾಧ್ಯವಾಗಿದ್ದರೂ, ಸಾಹಿತ್ಯಿಕ ಚಟುವಟಿಕೆಗಳನ್ನು ಸ್ಥಗಿತಗೊಳಸದೆ ಆನ್ಲೈನ್ ಮೂಲಕ ತನ್ನ ಕೆಲಸ ಮುಂದುವರೆಸಿದೆ. ಪರಿಣಾಮವಾಗಿ, ಕವಿ-ಕಾವ್ಯ,ಕನ್ನಡದ ಕತೆಗಾರ್ತಿಯರ ಕಥೆಗಳ ಚರ್ಚಾ ಸರಣಿ ಮತ್ತು ಒಂಬತ್ತು ದಿನಗಳ ಅಂತರ್-ರಾಷ್ಟ್ರೀಯ ಮಟ್ಟದ `ವಿಶ್ವಕನ್ನಡ ನವರಾತ್ರಿ ಕಾವ್ಯೋತ್ಸವ’ ಮುಂತಾದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಯಾಗಿ ನೆರವೇರಿಸುತ್ತ ಮುನ್ನಡೆದಿದೆ. 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: