ಈ ಹೊತ್ತಿಗೆ ಬಳಗವು ಸಾಹಿತ್ಯಾಸಕ್ತರಿಗೆಲ್ಲ ಆತ್ಮಿಯ ಸ್ವಾಗತ ಕೋರುತ್ತದೆ.

ಇದೇ ಭಾನುವಾರ, ದಿನಾಂಕ: 24, ಮಾರ್ಚ್ 2024ರಂದು ಬೆಂಗಳೂರಿನ ಕಪ್ಪಣ್ಣ ಅಂಗಳದಲ್ಲಿ, ಬೆಳಿಗ್ಗೆ 10.30ರಿಂದ ಮದ್ಯಾಹ್ನ 1.30ರವರೆಗೆ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮ ನಡೆಯಲಿದೆ. 2024ನೇ ಸಾಲಿನ ಪ್ರಶಸ್ತಿ ಪ್ರದಾನ, ಪ್ರಶಸ್ತಿ ವಿಜೇತ ಕೃತಿಗಳ ಬಿಡುಗಡೆ, ನಾಡಿನ ಖ್ಯಾತ ವಿಮರ್ಶಕರಾದ ಡಾ. ಎಂ ಎಸ್ ಆಶಾದೇವಿ ಅವರಿಗೆ ಸನ್ಮಾನ ಹಾಗೂ ಉಪನ್ಯಾಸ, ಇವು ಈ ಸಲದ ಕಾರ್ಯಕ್ರಮದ ಪ್ರಮುಖ ಅಂಶಗಳಾಗಿವೆ. 

‘ಸಾಮಾಜಿಕ ತ್ವರಿತ ಪಲ್ಲಟಗಳು ಮತ್ತು ಕನ್ನಡ ಸಾಹಿತ್ಯ’ ವಿಷಯದ ಮೇಲೆ ಪತ್ರಕರ್ತರಾದ ವಿದ್ಯಾರಶ್ಮಿ ಪೆಲತ್ತಡ್ಕ ಅವರು ಮಾತನಾಡಲಿದ್ದಾರೆ.  

2024ರ ಕಥಾ ಪ್ರಶಸ್ತಿಯು, ದಾವಣಗೆರೆ ಸಮೀಪದ ಹೊನ್ನಾಳಿಯವರಾದ ಸದಾಶಿವ ಸೊರಟೂರು ಅವರ ‘ಧ್ಯಾನಕ್ಕೆ ಕೂತ ನದಿ’ ಸಂಕಲನಕ್ಕೆ ಹಾಗೂ ಕಾವ್ಯ ಪ್ರಶಸ್ತಿಯು ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಸಂಕಲನಕ್ಕೆ ಲಭಿಸಿದ್ದು, ವಿಜೇತರಿಗೆ ಪತ್ರಕರ್ತರಾದ ರಶ್ಮಿ ಎಸ್ ಅವರು ಕೃತಿಗಳನ್ನು ಬಿಡುಗಡೆ ಮಾಡಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ತೀರ್ಪುಗಾರರಾದ ಖ್ಯಾತ ಕವಿ ಪ್ರತಿಭಾ ನಂದಕುಮಾರ್, ಕತೆಗಾರರು, ಪತ್ರಕರ್ತರೂ ಆದ ದೇವು ಪತ್ತಾರ್ ಅವರು ಹಾಗೂ ಈ ವರ್ಷದ ಪೂರ್ವ ಆಯ್ಕೆ ಸಮಿತಿಯಲ್ಲಿದ್ದ ಸಿಂಧು ರಾವ್, ರೇಣುಕ ಕೋಡಗುಂಟಿ, ಆನಂದ ಕುಂಚನೂರ್ ಮತ್ತು ಮಧುಸೂದನ್ ವೈ ಎನ್ ಉಪಸ್ಥಿತರಿರುತ್ತಾರೆ. ಆನಂದ ಕುಂಚನೂರ್ ಮತ್ತು ಇಂದಿರಾ ಶರಣ್ ಪ್ರಶಸ್ತಿ ವಿಜೇತ ಕೃತಿಗಳನ್ನು ಪರಿಚಯಲಿದ್ದಾರೆ.
ಕತೆ ಮತ್ತು ಕವನಗಳ ವಾಚನವನ್ನು ಗೀತಾ ಕುಂದಾಪುರ, ಇಂದಿರಾ ಶರಣ್, ಸಿಂಧು ರಾವ್ ಮತ್ತು ಶಂಕರ್ ಸಿಹಿಮೊಗ್ಗೆ ಮಾಡಲಿದ್ದಾರೆ. 

ಇದೇ ಸಮಯದಲ್ಲಿ ಕನ್ನಡ ಸಾಹಿತ್ಯ ಲೋಕದ ವಿಮರ್ಶಕರಾದ ಡಾ. ಎಂ ಎಸ್ ಆಶಾದೇವಿಯವರಿಗೆ ಈ ಹೊತ್ತಿಗೆಯು ಗೌರವಾದರಗಳಿಂದ ಸನ್ಮಾನಿಸಲಿದೆ. 

ಕಾರ್ಯಕ್ರಮದ ನಿರೂಪಣೆಯನ್ನು ಸಂಗೀತ ಚಚಡಿ, ಸ್ವಾಗತವನ್ನು ಸುಮ ಅನಿಲ್, ವಂದನಾರ್ಪಣೆಯನ್ನು ಸರ್ವಮಂಗಳ ಮೋಹನ್ ಅವರುಗಳು ನಿರ್ವಹಿಸಲಿದ್ದು, ಜಯಲಕ್ಷ್ಮಿ ಪಾಟೀಲ್ ಪ್ರಾಸ್ತಾವಿಕ ಮಾತುಗಳನ್ನಾಡಲಿದ್ದಾರೆ.