ದಿನಾಂಕ 30 ಎಪ್ರಿಲ್ 2023ರಂದು, ಸಂಜೆ 5.00 ಗಂಟೆಗೆ ಜೆಪಿ ನಗರದ ೧ನೇ ಫೇಸಲ್ಲಿರುವ ಕಪ್ಪಣ್ಣ ಅಂಗಳದಲ್ಲಿ, ಈ ಹೊತ್ತಿಗೆಯು, ಸಾಹಿತ್ಯ ಅಕಾಡೆಮಿ, ಹೊಸ ದೆಹಲಿ ಇವರ ಸಹಯೋಗದೊಂದಿಗೆ ಇತ್ತೀಚಿಗೆ ನಮ್ಮನ್ನಗಲಿದ ನಾಡೋಜ ಸಾರಾ ಅಬೂಬಕ್ಕರ್ ಅವರ ಸಾಹಿತ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಬಿ ಟಿ ಲಲಿತಾ ನಾಯಕ್ ಅವರ ಅಧ್ಯಕ್ಷತೆಯಲ್ಲಿ ವಿಮರ್ಶಕರಾದ ಡಾ. ಹೆಚ್ ಎಸ್ ಸತ್ಯನಾರಾಯಣ ಮತ್ತು ಸಾಹಿತಿ ಇಂದಿರಾ ಶರಣ್ ಅವರು ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳ ಕುರಿತು ಹಾಗೂ ಕಾದಂಬರಿಗಾರ್ತಿ ಸಂಧ್ಯಾರಾಣಿ ಮತ್ತು ಕವಿ ಕತೆಗಾರ ಆನಂದ್ ಕುಂಚನೂರ್ ಅವರು ಕಥೆಗಳು ಮತ್ತು ಅನುವಾದಗಳ ಕುರಿತು ಮಾತನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಸರ್ವಮಂಗಳ ಮೋಹನ್ ಅವರು ಮಾಡಿದರು.

ಈ ಹೊತ್ತಿಗೆಯ ಅಧ್ಯಕ್ಷರಾದ ಜಯಲಕ್ಷ್ಮಿ ಪಾಟೀಲ್ ಅವರ ಪ್ರಾಸ್ತಾವಿಕ ನುಡಿ.
ವೃತ್ತಿಯಲ್ಲಿ ಶಿಕ್ಷಕರಾಗಿರುವ, ಈ ಹೊತ್ತಿಗೆಯ ಸದಸ್ಯರೂ, ಬರಹಗಾರರೂ ಆದ ಇಂದಿರಾ ಶರಣ್ ಅವರು ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳ ಕುರಿತು ಮಾತನಾಡಿದರು.
ವೃತ್ತಿಯಲ್ಲಿ ಕಾಲೇಜಿನ ಪ್ರಾಧ್ಯಾಪಕರಾಗಿರುವ, ವಿಮರ್ಶಕರಾದ ಡಾ. ಹೆಚ್ ಎಸ ಸತ್ಯನಾರಾಯಣ ಅವರು ಸಾರಾ ಅಬೂಬಕ್ಕರ್ ಅವರ ಕಾದಂಬರಿಗಳ ಕುರಿತು ಮಾತನಾಡಿದರು.
ಸಾರಾ ಅಬೂಬಕ್ಕರ್ ಅವರ ಕಥೆಗಳ ಕುರಿತು, ಕವಿ, ಕಥೆಗಾರ ಆನಂದ ಕುಂಚನೂರ್ ಅವರು ಮಾತನಾಡಿದರು.
ಸಾರಾ ಅಬೂಬಕ್ಕರ್ ಅವರ ಕಥೆಗಳ ಕುರಿತು, ಕವಿ, ಕಾದಂಬರಿಗಾರ್ತಿ, ಎನ್ ಸಂಧ್ಯಾರಾಣಿ ಅವರು ಮಾತನಾಡಿದರು.
ಸಾರಾ ಸಾಹಿತ್ಯ ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ್ದ ಹಿರಿಯ ರಾಜಕಾರಣಿಗಳೂ, ಸಾಹಿತಿಯೂ ಆದ ಬಿ ಟಿ ಲಲಿತ ನಾಯಕ್ ಅವರು ಸಾರಾ ಅಬೂಬಕ್ಕರ್ ಅವರ ಕಥೆಗಳ ಕುರಿತು ಮಾತನಾಡಿದರು.